ಪ್ರೇಮ್ ಈಗ ‘ಹಿಟ್ಲರ್’
Posted date: 01 Mon, Sep 2014 – 09:25:14 AM

ಶಿಷ್ಯನ ಸಿನೆಮಾದಲ್ಲಿ ಗುರು. ರಘು ಹಾಸನ್ ಅವರ ಗುರುಗಳಾದ ಹ್ಯಾಟ್ ಟ್ರಿಕ್ ನಿರ್ದೇಶಕ ಕಮ್ ನಟ ಪ್ರೇಮ್ ಅವರನ್ನು 'ಹಿಟ್ಲರ್' ಆಗಿ ಮಾಡುತ್ತಿದ್ದಾರೆ. ರಘು ಹಾಸನ್ ಅವರು 11 ವರ್ಷಗಳ ಕಾಲ 'ಕರಿಯ ಇಂದ ಹಿಡಿದು ರಾಜ್ ದಿ ಶೋ ಮ್ಯಾನ್' ತನಕ ಪ್ರೇಮ್ ಅವರ ಜೊತೆ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಇದೆ. ಅದರ ಜೊತೆಗೆ 'ಹುಚ್ಚು ಹುಡುಗ್ರು' ಸಿನೆಮಕ್ಕೆ ಚಿತ್ರಕಥೆ ಸಂಭಾಷಣೆ ಸಹ ಒದಗಿಸಿದ್ದಾರೆ.

ಪ್ರತಿಯೊಬ್ಬ ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ಕೆಲವು ಸಮಯದಲ್ಲಿ 'ಹಿಟ್ಲರ್' ಗುಣ ಹೊಂದಿರುತ್ತಾನೆ. ಅದೇ ಗುಣ ನಾಯಕ ಹೊಂದಿರುತ್ತಾನೆ. ಇದರ ಜೊತೆಗೆ ತಾಯಿ ಅಂದರೆ ಅವನಿಗೆ ಪಂಚಪ್ರಾಣ. ಇದೆಲ್ಲದರ ಸಮ್ಮಿಲನವೇ 'ಹಿಟ್ಲರ್'.

ವೇದ ಮೂರ್ತಿ ಹಾಗೂ ಆರ್ ಜೆ ಸ್ಟುಡಿಯೋ ಜೊತೆ ಸೇರಿ ನಿರ್ಮಾಣ ಮಾಡಲಿರುವ ಚಿತ್ರವೂ ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ತಾಯಿಯ ಪಾತ್ರಕ್ಕೆ ಅರುಂಧತಿ ನಾಗ್ ಅಥವಾ ಡಾಕ್ಟರ್ ಭಾರತಿ ವಿಷ್ಣುವರ್ಧನ ಅಥವಾ ಆರತಿ ಅವರು ಇದ್ದರೆ ಅದ್ಬುತ ಎಂಬುದು ರಘು ಹಾಸನ್ ಅವರ ಅಭಿಪ್ರಾಯ, ಈ ಮೂರರಲ್ಲಿ ಯಾರು ಒಪ್ಪಿದರೂ ಚಿತ್ರಕ್ಕೆ ತೂಕ ಹೆಚ್ಚುತ್ತದೆ ಎನ್ನುತ್ತಾರೆ.

ಅನೂಪ್ ಸೀಳಿನ್ ಅವರ ಸಂಗೀತ, ಶಾನ್ (ಬಾಸು ಅದೇ ಹಳೆ ಕಥೆ ನಿರ್ದೇಶಕ, ನಟ) ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರಕ್ಕೆ ಇಬ್ಬರು ನಾಯಕಿಯರ ಅವಶ್ಯಕತೆ ಇದೆ. ಬೆಂಗಳೂರು, ಹಳ್ಳಿಯ ಪರಿಸರ ಹಾಗೂ ಲಡಕ್ ಅಲ್ಲಿ ಚಿತ್ರಣ ಆಗಲಿದೆ.

ಪೋಷಕ ಕಲಾವಿದರಲ್ಲಿ ರವಿಶಂಕರ್, ಸಾಧು ಕೋಕಿಲ, ಚಿಕ್ಕಣ್ಣ ಹಾಗೂ ಇತರರು ಇರಲಿದ್ದಾರೆ. ಮಾತೃಶ್ರೀ ಮೂವೀಸ್ ಅಲ್ಲಿ 'ಹಿಟ್ಲರ್' ತಯಾರಾಗಲಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed